ತಲ್ಲೂರು: ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರು ಆಯೋಜಿಸಿದ್ದ ಯಶೋಗಾನ- ವಿಶೇಷ ಮಕ್ಕಳ ಬದುಕು ಬದಲಾಯಿಸಿದ ಯಶೋಗಾಥೆ ಲೇಖನ ಸ್ಪರ್ಧೆಯ ಫಲಿತಾಂಶವನ್ನು ಸಂಸ್ಥೆಯು ಪ್ರಕಟಿಸಿದೆ. ವಿಶೇಷ ಮಕ್ಕಳ ತರಬೇತಿಯಲ್ಲಿ ತೊಡಗಿಸಿಕೊಂಡವರ ಅನುಭವವನ್ನು ಆಧರಿಸಿ ನಡೆಸಿದ ರಾಜ್ಯಮಟ್ಟದ ಲೇಖನ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆತಿದೆ.
ಈ ಕೆಳಗಿನವರ ಲೇಖನಗಳು ತೀರ್ಪುಗಾರರಿಂದ ಆಯ್ಕೆಯಾಗಿ ನಗದು ಪುರಸ್ಕಾರಕ್ಕೆ ಭಾಜನವಾಗಿದೆ.
ಯೂನಿಸ್ ಕ್ರಿಸ್ತಾಬೆಲ್ ಕರ್ಕಡ- ಆಶಾ ನಿಲಯ ವಿಶೇಷ ಮಕ್ಕಳ ಶಾಲೆ, ಉಡುಪಿ.
ರತ್ನ- ಆಶಾ ನಿಲಯ ವಿಶೇಷ ಮಕ್ಕಳ ಶಾಲೆ, ಉಡುಪಿ.
ರಾಜೇಶ್ವರಿ- ವಾಗ್ಜ್ಯೋತಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆ, ಅಂಪಾರು
ಅಮಿತ- ಚೇತನ ವಿಶೇಷ ಮಕ್ಕಳ ಶಾಲೆ ಆನೆಕೆರೆ ಕಾರ್ಕಳ.
ಮಕ್ಕಳ ತಜ್ಞ ಡಾ. ಅಮರನಾಥ ಶಾಸ್ತ್ರಿ, ಕೆ.ಎಂ.ಸಿ ಮಣಿಪಾಲ ಮನೋವೈದ್ಯ ಡಾ. ರವೀಂದ್ರ ಮನೋಳಿ, ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಇದರ ಆಪ್ತ ಸಮಾಲೋಚಕಿ ಹಾಗೂ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಹಿರಿಯ ಪತ್ರಕರ್ತರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಟ್ರಸ್ಟಿ ರಾಜಾರಾಂ ತಲ್ಲೂರು, ಭಾಷಾ ತಜ್ಞರು ಮತ್ತು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಟ್ರಸ್ಟಿ ಸದಾನಂದ ತಲ್ಲೂರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.