Saturday, September 28, 2024
Saturday, September 28, 2024

ಅಧ್ಯಯನಕ್ಕೆ ಒತ್ತು ನೀಡಿದರೆ ಉನ್ನತಿ ಸಾಧ್ಯ: ಪ್ರೊ ಕೆ.ಇ. ದೇವನಾಥನ್

ಅಧ್ಯಯನಕ್ಕೆ ಒತ್ತು ನೀಡಿದರೆ ಉನ್ನತಿ ಸಾಧ್ಯ: ಪ್ರೊ ಕೆ.ಇ. ದೇವನಾಥನ್

Date:

ಪಾಡಿಗಾರು: ಬಾಲ್ಯದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಬಾರದು. ಕಠಿಣವಾದ ಪರಿಶ್ರಮದಿಂದ ಅಧ್ಯಯನವನ್ನು ತಪಸ್ಸಿನಂತೆ ನಡೆಸಬೇಕು. ಈ ಮೂಲಕ ನಾವು ಪಡೆದ ವಿದ್ಯೆಯೇ ನಮಗೆ ಉನ್ನತ ಸ್ಥಾನವನ್ನು ನೀಡುತ್ತದೆ. ಸುಮಾರು 35 ವರ್ಷಗಳ ಹಿಂದೆ ನಾನು ಉನ್ನತಾಭ್ಯಾಸಕ್ಕಾಗಿ ನವದೆಹಲಿಯಲ್ಲಿದ್ದಾಗ ಶ್ರೀ ಪುತ್ತಿಗೆ ಶ್ರೀಪಾದರ ಸನ್ನಿಧಿಯಲ್ಲಿ ವೇದಾಂತ ಪರೀಕ್ಷೆಯನ್ನು ಕೊಟ್ಟಿದ್ದೆ. ಅಂದು ಶ್ರೀಗಳು ನನ್ನನ್ನು ವಿಶೇಷವಾಗಿ ಅನುಗ್ರಹಿಸಿದ್ದರು. ಇದೆಲ್ಲದರ ಫಲವಾಗಿ ಇಂದು ಈ ಉನ್ನತ ಪದವಿ ದೊರೆತಿದೆ. ಆದ್ದರಿಂದ ಕಠಿಣವಾದ ಪರಿಶ್ರಮದಿಂದ ಅಧ್ಯಯನವನ್ನು ನಡೆಸಿ ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಇ. ದೇವನಾಥನ್ ಹೇಳಿದರು.

ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪಾಡಿಗಾರಿನ ಶ್ರೀ ಪುತ್ತಿಗೆ ವಿದ್ಯಾಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಪ್ರೊ. ದೇವನಾಥನ್ ಅವರ ವಿದ್ವತ್ತು ಜೊತೆಗೆ ಅವರ ಸರಳತೆಯು ಎಲ್ಲರಿಗೂ ಆದರ್ಶ ಎಂದರು. ಸಂಸ್ಕೃತದ ಉನ್ನತ ವಿದ್ವಾಂಸರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಆಗಮಿಸಿದ್ದರಿಂದ ಸಂಸ್ಕೃತ ಕ್ಷೇತ್ರವು ಇನ್ನೂ ವ್ಯಾಪಕವಾಗಿ ಬೆಳಗಲಿ ಎಂದು ಅಭಿನಂದಿಸಿದರು. ಕುಲಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಶ್ರೀ ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ವಿದ್ವಾನ್ ಸುನೀಲ್ ಆಚಾರ್ಯ, ವಿದ್ವಾನ್ ಶ್ರೀಪತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆರೋಗ್ಯ ನಿಗಾ ಸಹಾಯಕರ ಉದ್ಯೋಗಾಧಾರಿತ ತರಬೇತಿ: ಅರ್ಜಿ ಆಹ್ವಾನ

ಉಡುಪಿ, ಸೆ.27: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಇವರು ವತಿಯಿಂದ...

‘ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್; ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಸುವರ್ಣಾವಕಾಶ

ಉಡುಪಿ, ಸೆ.27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ...

ಬೀಚ್ ಸ್ವಚ್ಛತಾ ಕಾರ್ಯಕ್ರಮ

ಉಡುಪಿ, ಸೆ.27: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ...

ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಸೆ.27: ಗರ್ಭಿಣಿ ಮಹಿಳೆಯರು ಹಾಗೂ ನವಜಾತ ಶಿಶುಗಳ ನಿರಂತರ ಕಾಳಜಿಯನ್ನು...
error: Content is protected !!