ಶಿರ್ವ: ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯು ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕ ಅ. ವಂ. ಧರ್ಮಗುರುಗಳಾದ ಡೆನಿಸ್ ಡೇಸಾ ಹೇಳಿದರು. ಅವರು ಸಂತ ಮೇರಿ ಮಹಾವಿದ್ಯಾಲಯದ ಆಡಳಿತ ಸಿಬ್ಬಂದಿಯಾದ ಅಲ್ವಿರಾ ಕ್ಲೇರೆನ್ಸ್ ಫೆರ್ನಾಂಡಿಸ್ ರವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ಹೆರಾಲ್ಡ್ ಮೋನಿಸ್ ಸ್ವಾಗತಿಸಿದರು. ಆಡಳಿತ ಮಂಡಳಿಯ ಪರವಾಗಿ ಡೊರಿನ್ ಹಾಗೂ ಅಧ್ಯಾಪಕ ವೃಂದದ ಪರವಾಗಿ ರೀಮಾ ಲೋಬೊ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಲೊರೆನ್ಸ್ ಸನ್ಮಾನ ಪತ್ರ ವಾಚಿಸಿದರು. ಕಾಲೇಜು ಮತ್ತು ಆಡಳಿತ ಮಂಡಳಿಯ ವತಿಯಿಂದ ಸೇವಾ ನಿವೃತ್ತರಾದ ಅಲ್ವಿರಾ ರವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕಿ ಯಶೋಧ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಾಕ್ಷಾಯಿನಿ ಉಪಸ್ಥಿತರಿದ್ದರು. ತನೂಜ, ದಿವ್ಯಾಶ್ರೀ, ಪದ್ಮಾಸಿನಿ ಪ್ರಾರ್ಥಿಸಿ, ಪ್ಲೋರಿನ್ ವಂದಿಸಿದರು. ಶರ್ಮಿಳ ಕಾರ್ಯಕ್ರಮ ನಿರೂಪಿಸಿದರು.