ಟೋಕಿಯೊ: ಇಂದು ನಡೆದ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್ ವೆಲ್ಟರ್ವೈಟ್ (64-69 ಕೆಜಿ) ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಲೋವ್ಲಿನಾ ಬೊರ್ಗೊಹೈನ್ ಚೈನೀಸ್ ತೈಪೆಯ ಚಿನ್-ಚೆನ್ ನಿಯೆನ್ ವಿರುದ್ಧ 4-1 ಅಂತರದಿಂದ ಜಯಗಳಿಸಿ ಪದಕದ ಆಸೆಯನ್ನು ಚಿಗುರಿಸಿದ್ದಾರೆ.
ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ನಲ್ಲಿ ಪರಾಭವಗೊಂಡರೂ ಉಭಯ ಬಾಕ್ಸರ್ ಗಳಿಗೂ ಕಂಚಿನ ಪದಕ ಸಿಗಲಿರುವುದರಿಂದ ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಾತರಿಯಾಗಿದೆ. ತನ್ಮೂಲಕ 2008ರಲ್ಲಿ ವಿಜೇಂದರ್ ಸಿಂಗ್, 2012 ರಲ್ಲಿ ಮೇರಿ ಕೊಮ್ ಬಳಿಕ ಇದೀಗ ಬಾಕ್ಸಿಂಗ್ ನಲ್ಲಿ 23ರ ಹರೆಯದ ಲೋವ್ಲಿನಾಗೆ ಪದಕ ಸಿಗಲಿದೆ.
ಕ್ವಾರ್ಟರ್ ಫೈನಲ್ ನಲ್ಲಿ ಲೋವ್ಲಿನಾ ಗೆದ್ದ ನಂತರ ಆಕೆಯ ಹುಟ್ಟೂರು ಅಸ್ಸಾಮ್ ರಾಜ್ಯದ ಗೋಲಾಘಟ್ ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.