ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಳೆಯ ಕನ್ವೆನ್ಶನಲ್ ಲೈಟ್ ಗಳನ್ನು ಎಲ್.ಇ.ಡಿ ಲೈಟ್ ಗಳನ್ನಾಗಿಸಿ ಪರಿವರ್ತಿಸುವ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಗರದ ಬೆಳವಣಿಗೆಗೆ ಪೂರಕವಾಗಿ ಮೂಲಭೂತ ಸೌಕರ್ಯಗಳನ್ನು ಬದಲಾಯಿಸಬೇಕು. ಆ ನಿಟ್ಟಿನಲ್ಲಿ ನಗರದ ಕನ್ವೆನ್ಷನಲ್ ಲೈಟ್ ಗಳನ್ನು ಬದಲಾಯಿಸಿ ಎಲ್.ಇ.ಡಿ ಲೈಟ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಟೆಂಡರ್ ಪ್ರಕ್ರಿಯೆಗಳನ್ನು ಮತ್ತು ಇನ್ನಿತರ ತಾಂತ್ರಿಕ ಅನುಮತಿ ಪೂರ್ಣಗೊಳಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತ್ತು. ಇದು ಸಂಪೂರ್ಣ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಯಾಗಿದ್ದು ಇದರಲ್ಲಿ ಸರಕಾರಕ್ಕೆ ಅಥವಾ ಪಾಲಿಕೆಗೆ ಹೂಡಿಕೆಯ ಹೊರೆ ಬೀಳುವುದಿಲ್ಲ.
7 ವರ್ಷಗಳ ಕಾಲ ಯಾವುದೇ ರೀತಿಯ ನಿರ್ವಹಣೆಯ ವೆಚ್ಚವನ್ನು ಕೂಡ ಪಾಲಿಕೆ ಅಥವಾ ಸರಕಾರ ಭರಿಸುವುದಿಲ್ಲ. ವಿದ್ಯುತ್ ಉಳಿತಾಯದ ವಿಚಾರದಲ್ಲೂ ಕೂಡ ಇದು ಮತ್ತರವಾದ ಪಾತ್ರ ವಹಿಸಲಿದೆ ಎಂದು ಶಾಸಕ ಕಾಮತ್ ಎಂದು ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಪೂರ್ಣಿಮಾ, ಕದ್ರಿ ಮನೋಹರ್ ಶೆಟ್ಟಿ, ಶೈಲೇಶ್ ಶೆಟ್ಟಿ ಅತ್ತಾವರ, ಗಣೇಶ್ ಕುಲಾಲ್, ಅಬ್ದುಲ್ ಲತೀಫ್, ಭಾನುಮತಿ, ರೇವತಿ ಶ್ಯಾಮ್ ಸುಂದರ್, ಚಂದ್ರಾವತಿ ವಿಶ್ವನಾಥ್, ಜಯಲಕ್ಷ್ಮಿ ಶೆಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.